ಅಂಬರದ ಮನೆಯೊಳಗೆ ಗಂಭೀರ್ಯತ್ವದ
ಅಂಗನೆಯ ಕಂಡೆನಯ್ಯ.
ಆಕೆಯ ಸಂಗದಿಂದ ಸತ್ತಚಿತ್ತಾನಂದ ನಿತ್ಯಪರಿಪೂರ್ಣವೆಂಬ
ಐದಂಗವ ಗರ್ಭೀಕರಿಸಿಕೊಂಡು
ಪರವಶದಲ್ಲಿ ನಿಂದು,ಪರಕೆ ಪರವನೈದಿದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ambarada maneyoḷage gambhīryatvada
aṅganeya kaṇḍenayya.
Ākeya saṅgadinda sattacittānanda nityaparipūrṇavemba
aidaṅgava garbhīkarisikoṇḍu
paravaśadalli nindu,parake paravanaidida nōḍā
jhēṅkāra nijaliṅgaprabhuve.