Index   ವಚನ - 91    Search  
 
ಒಂದು ಮುಳ್ಳುಮೊನೆಯ ಮೇಲೆ ಅರವತ್ತು ಆರು ಕೋಟಿ ಪಟ್ಟಣಂಗಳು ಪುಟ್ಟಿಇದ್ದಾವು ನೋಡಾ ! ಪಾತಾಳಲೋಕದಲ್ಲಿ ಆಧಾರವೆಂಬ ಠಾಣ್ಯ; ಬ್ರಹ್ಮನೆಂಬ ಮುಜುಮದಾರ. ಮರ್ತ್ಯಲೋಕದಲ್ಲಿ ಸ್ವಾಧಿಷ್ಠವೆಂಬ ಠಾಣ್ಯ; ವಿಷ್ಣುವೆಂಬ ಹುದ್ದೆಯದಾರ. ಸ್ವರ್ಗಲೋಕದಲ್ಲಿ ಮಣಿಪೂರಕವೆಂಬಠಾಣ್ಯ; ರುದ್ರನೆಂಬ ಮಹಲದಾರ. ತತ್ಪುರುಷಲೋಕದಲ್ಲಿ ಅನಾಹತವೆಂಬ ಠಾಣ್ಯ; ಈಶ್ವರನೆಂಬ ಗೌಡ . ಈಶಾನ್ಯಲೋಕದಲ್ಲಿ ವಿಶುದ್ಧಿಯೆಂಬ ಠಾಣ್ಯ; ಸದಾಶಿವನೆಂಬ ಪ್ರಧಾನಿ. ಅಂಬರಲೋಕದಲ್ಲಿ ಆಜ್ಞೇಯವೆಂಬ ಠಾಣ್ಯ; ಪರಶಿವನೆಂಬ ಅರಸು. ನಾದಲಕ್ಷ ಬಿಂದುಲಕ್ಷ ಕಳಾಲಕ್ಷ ಇಂತೀ ತ್ರಿವಿಧಲಕ್ಷವನೊಳಕೊಂಡು ಪರಶಿವನೆಂಬ ಅರಸು ಕೂಡಿ ವಿಶ್ವತೋ ಬೆಳಗಿಂಗೆ ಬೆಳಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.