Index   ವಚನ - 92    Search  
 
ಆರು ನೆಲೆಯ ಮಂಟಪದೊಳಗೆ ಸಾರುತಿರ್ದವಯ್ಯ ಶ್ರುತಿಗಳು. ಆರು ನೆಲೆಗಳ ವಿೂರಿ, ಮೂರು ಕೋಣೆಗಳ ದಾಂಟಿ, ನಾದ ಬಿಂದು ಕಳಾತೀತನಾಗಿ ನಿಂದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.