ವಿಶ್ವತೋಬ್ರಹ್ಮಾಂಡವನೊಳಕೊಂಡು ಇರ್ದ ಲಿಂಗವ
ನೋಡಹೋಗದಮುನ್ನ ಅದು ಎನ್ನನೊಳಗೊಂಡಿತ್ತಯ್ಯ.
ಅದಕ್ಕೆ ಮುಖ ಒಂದು, ಅಂಗ ಮೂರು,
ಹಸ್ತಂಗಳಾರು, ಪಾದ ಮೂವತ್ತಾರು.
ಒಂಬತ್ತು ಬಾಗಿಲ ಗುಡಿಯೊಳಗೆ ಪೂಜೆಗೊಂಬ ಲಿಂಗವನು
ಅಂಗಕರಣವನುಳಿದು ಲಿಂಗಕಿರಣವಾದವರಿಂಗೆ ಕಾಣಬಪ್ಪುದಯ್ಯ,
ಅಂಗಕರಣವಿರ್ದು ಲಿಂಗಕಿರಣವಿಲ್ಲದವರಿಂಗೆ
ದೂರವಾಗಿಪ್ಪುದಯ್ಯ ಆ ಲಿಂಗವು
ಝೇಂಕಾರ ನಿಜಲಿಂಗಪ್ರಭುವೆ.