Index   ವಚನ - 126    Search  
 
ಆತ್ಮನೆಂಬ ಅಂಗಕ್ಕೆ ನಿರಾತ್ಮನೆಂಬ ಲಿಂಗವು ಒಳಹೊರಗೆ ಪರಿಪೂರ್ಣವಾಗಿ ಕಿರಣವ ಸೂಸುತಿರ್ಪುದು ನೋಡಾ ! ಆ ಕಿರಣವ ಆತ್ಮನು ನುಂಗಿ, ನಿರಾತ್ಮನೆಂಬ ಲಿಂಗವ ನಿರ್ವಯಲು ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.