ನವಗೃಹದ ಮೇಲೆ ನಿರ್ವಯಲೆಂಬ ಸತಿಯಳು
ನಿಂದಿರುವುದನ್ನು ಕಂಡೆನಯ್ಯ.
ಆಕಿಂಗೆ ಚಿದಾತ್ಮನೆಂಬ ಮಗ ಹುಟ್ಟಿ, ಐವರ ಸಂಗವ ಮಾಡಿ, ಸಾಸಿರದಳಕಮಲವ ಪೊಕ್ಕು, ಶಿಖಾಚಕ್ರವೆಂಬ ಮೆಟ್ಟಿಗೆವಿಡಿದು, ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯ ಕೂಡಿ
ನಿರವಯವೆಂಬ ಸತಿಯಳ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Navagr̥hada mēle nirvayalemba satiyaḷu
nindiruvudannu kaṇḍenayya.
Ākiṅge cidātmanemba maga huṭṭi, aivara saṅgava māḍi, sāsiradaḷakamalava pokku, śikhācakravemba meṭṭigeviḍidu, paścimadvāravemba niran̄janajyōtiya kūḍi
niravayavemba satiyaḷa kaṇḍe nōḍā
jhēṅkāra nijaliṅgaprabhuve.