ಸರ್ವಬ್ರಹ್ಮಾಂಡವ ಗರ್ಭೀಕರಿಸಿಕೊಂಡಿರ್ದ ಮೂರ್ತಿಗೆ
ಭಕ್ತನೆ ಎಡದ ಪಾದ, ಮಹೇಶ್ವರನೆ ಬಲದ ಪಾದ,
ಪ್ರಸಾದಿಯೆ ಎಡದ ಹಸ್ತ, ಪ್ರಾಣಲಿಂಗಿಯೆ ಬಲದ ಹಸ್ತ,
ಶರಣನೆ ಎಡದ ಕಣ್ಣು, ಐಕ್ಯನೆ ಬಲದ ಕಣ್ಣು,
ಓಂಕಾರವೆ ನಿಜಮುಖ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sarvabrahmāṇḍava garbhīkarisikoṇḍirda mūrtige
bhaktane eḍada pāda, mahēśvarane balada pāda,
prasādiye eḍada hasta, prāṇaliṅgiye balada hasta,
śaraṇane eḍada kaṇṇu, aikyane balada kaṇṇu,
ōṅkārave nijamukha nōḍā
jhēṅkāra nijaliṅgaprabhuve.