ಬ್ರಹ್ಮ ವಿಷ್ಣು ರುದ್ರಾದಿಗಳನೊಳಗೊಂಡಿದ್ದಂತಾತನೇ ಈಶ್ವರ.
ಈಶ್ವರ ಸದಾಶಿವ ಪರಶಿವನೊಳಕೊಂಡಿದ್ದಂತಾತನೇ ಪರಬ್ರಹ್ಮವು.
ನಾದಬಿಂದುಕಲಾತೀತನನೊಳಕೊಂಡಿದ್ದಂತಾತನೇ ಬ್ರಹ್ಮವು ನೋಡಾ.
ಆ ಬ್ರಹ್ಮದ ಅಂಗವು ಹೇಗೆಂದಡೆ:
ಜಾಗ್ರವು ಅಲ್ಲ, ಸ್ವಪ್ನವು ಅಲ್ಲ, ಸುಷುಪ್ತಿಯೂ ಅಲ್ಲ.
ಮರೆದೊರಗಿದ ಹಾಂಗೆ ನಿಷ್ಪತಿಯಾಗಿ ಕೂಡಬಲ್ಲರಿಗೆ ಕೂಡಿತ್ತು
ಕೂಡಲರಿಯದವರಿಂಗೆ ದೂರಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Brahma viṣṇu rudrādigaḷanoḷagoṇḍiddantātanē īśvara.
Īśvara sadāśiva paraśivanoḷakoṇḍiddantātanē parabrahmavu.
Nādabindukalātītananoḷakoṇḍiddantātanē brahmavu nōḍā.
Ā brahmada aṅgavu hēgendaḍe:
Jāgravu alla, svapnavu alla, suṣuptiyū alla.
Maredoragida hāṅge niṣpatiyāgi kūḍaballarige kūḍittu
kūḍalariyadavariṅge dūrāyittu nōḍā
jhēṅkāra nijaliṅgaprabhuve.