Index   ವಚನ - 177    Search  
 
ಒಂಬತ್ತು ಬಾಗಿಲ ಮನೆಯೊಳಗೆ ಆರು ಮೂರು ಕೋಣೆಯ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗದ ಕಿರಣವ ಒಬ್ಬ ಸತಿಯಳು ಕಂಡು ತನ್ನ ಪುತ್ರಂಗೆ ಹೇಳಲು ಆ ಪುತ್ರನು ನಿರಾಮಯವೆಂಬ ಕರಸ್ಥಲದಲ್ಲಿ ನಿಂದು ರಾಜಿಸುತಿರ್ಪ ನೋಡಾ! ಆ ಕರಸ್ಥಲದ ಮೇಲೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗದ ಸಂತತಿಯಲ್ಲಿ ಮೂವರು ಪೂಜಾರಿಗಳು ಲಿಂಗಾರ್ಚನೆಯ ಮಾಡುತಿರ್ಪರು ನೋಡಾ! ಊರೊಳಗಣ ಸತಿಯಳು ಒಂಬತ್ತು ಸೋಪಾನಂಗಳನೇರಿ ಮಂಗಳಾರತಿಯನೆತ್ತಿ ಆ ಲಿಂಗಕ್ಕೆ ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.