Index   ವಚನ - 182    Search  
 
ಉಲುವಡಗಿದ ಮರದ ಮೇಲೆ ಒಬ್ಬ ಸತಿಯಳು ನಿಂದು ಫಲವ ಮಾರುತಿಪ್ಪಳು ನೋಡಾ! ಆ ಫಲವ ಕೊಳ್ಳಹೋಗದ ಮುನ್ನ, ಆತನ ನುಂಗಿ ತನ್ನ ಸುಳುವ ತಾನೇ ತೋರುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.