Index   ವಚನ - 181    Search  
 
ನವದ್ವಾರಬೀದಿಗಳಲ್ಲಿ ಸುಳಿದಾಡುವ ಹಂಸನ ಕೊರಳಲ್ಲಿ ಇಪ್ಪತ್ತೈದು ಗ್ರಾಮಗಳ ಕಟ್ಟಿ ತೂಗುತದೆ ನೋಡಾ! ಸಮುದ್ರವೆಂಬ ಘೋಷದಲ್ಲಿ ಒಂದು ಕಪ್ಪೆ ಕುಳಿತು ಆ ಹಂಸನ ನುಂಗಿ ಕೂಗುತಿದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.