ಮೂರು ರತ್ನದ ಒಂದು ಲಿಂಗವ ಕಂಡೆನಯ್ಯ.
ಆ ಲಿಂಗದ ಕಿರಣದೊಳಗೆ
ಇಪ್ಪತ್ತೈದು ಕಂಬದ ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಮನೋಹರನೆಂಬ ಪೂಜಾರಿಯು
ಘನತರವೆಂಬ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mūru ratnada ondu liṅgava kaṇḍenayya.
Ā liṅgada kiraṇadoḷage
ippattaidu kambada śivālayava kaṇḍenayya.
Ā śivālayadoḷage manōharanemba pūjāriyu
ghanataravemba liṅgārcaneya māḍutirpanu nōḍā
jhēṅkāra nijaliṅgaprabhuve.