Index   ವಚನ - 194    Search  
 
ಆವು ಹೋಗಿ ಆರುದಿನವೆಂಬುದ ನಾನು ಬಲ್ಲೆನಯ್ಯ. ಕರು ಹೋಗಿ ಮೂರು ದಿನವೆಂಬುದ ನೀನು ಬಲ್ಲೆಯಯ್ಯಾ. ಮೀರಿದಮನೆಯಲ್ಲಿ ತಾನು ತಾನೆಂಬುದ ತಾನೆ ಬಲ್ಲನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.