Index   ವಚನ - 195    Search  
 
ಒಂಬತ್ತು ತಲೆಯ ಮೇಲೆ ಶಂಭುಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಸತಿಯಳು ತನ್ನ ಸುಳುವ ತಾನೆ ತೋರುತಿರ್ಪಳು ನೋಡಾ! ಒಬ್ಬ ಮಾನವನು ಸುಳುವಿನ ಭೇದವನರಿತು ನೆನವೆಂಬ ಸತಿಯಳ ಕೂಡಿಕೊಂಡು ಆ ಗುಡಿಯ ಪೊಕ್ಕು ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.