Index   ವಚನ - 240    Search  
 
ಒಬ್ಬ ಪುರುಷನು ಐದು ಮುಖದ ಸೂಳೆಯ ಸಂಗವ ಮಾಡಲು ಆ ಸೂಳೆಯ ಬಸುರಲ್ಲಿ ಒಬ್ಬ ಮಗ ಹುಟ್ಟಿ ಆ ಪುರುಷನ ನುಂಗಿ, ಲಿಂಗಾರ್ಚನೆಯ ಮಾಡುವುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.