ಸಜ್ಜನವೆಂಬ ಮಾರ್ಗದಲ್ಲಿ ಒಬ್ಬ ಬಾಲೆಯು ನಿಂದು
ನಿಜವ ತೋರುತಿರ್ಪಳು ನೋಡಾ.
ಆ ನಿಜವ ಈ ಜನಂಗಳೇನು ಬಲ್ಲರಯ್ಯ?
ಅಜ ಹರಿ ಸುರ ನಾರದ ಮೊದಲಾದವರಿಗೆ
ಅಗೋಚರವೆನಿಸಿತ್ತು ನೋಡಾ.
ಸ್ವಜ್ಞಾನಿಯಾದ ಶರಣನು ಆ ನಿಜವ ನೋಡಬಲ್ಲನಯ್ಯಾ.
ಆ ಬಾಲೆಯ ಅಂಗವ ಕೂಡಬಲ್ಲನಯ್ಯ.
ಆ ಸಜ್ಜನವೆಂಬ ಮಾರ್ಗವ ಹತ್ತಬಲ್ಲನಯ್ಯ.
ಇಂತಪ್ಪ ಶರಣಂಗೆ ನಮೋ ನಮೋ ಎನುತಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sajjanavemba mārgadalli obba bāleyu nindu
nijava tōrutirpaḷu nōḍā.
Ā nijava ī janaṅgaḷēnu ballarayya?
Aja hari sura nārada modalādavarige
agōcaravenisittu nōḍā.
Svajñāniyāda śaraṇanu ā nijava nōḍaballanayyā.
Ā bāleya aṅgava kūḍaballanayya.
Ā sajjanavemba mārgava hattaballanayya.
Intappa śaraṇaṅge namō namō enutirde nōḍā
jhēṅkāra nijaliṅgaprabhuve.