ಏನೇನೂ ಇಲ್ಲದಲ್ಲಿ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
ಆ ಪುರುಷಂಗೆ ಒಬ್ಬ ಸತಿಯಳು ಹುಟ್ಟಿದಳು ನೋಡಾ.
ಆ ಸತಿಯಳ ಅಂಗದಲ್ಲಿ
ಮೂವರು ಮಕ್ಕಳು ಇರುವುದ ಕಂಡೆನಯ್ಯ.
ಆ ಮಕ್ಕಳು ಒಂದೊಂದು ಎರಡೆರಡಾಗಿ,
ಆರು ಕೇರಿಗಳಲ್ಲಿ ಸುಳಿದಾಡುತಿರ್ಪರು ನೋಡಾ.
ಆ ಕೇರಿಗಳನಳಿದು, ಮೂರು ಮಕ್ಕಳ ಬಿಟ್ಟು
ಆ ಸತಿಯಳ ಅಂಗವ ಕೂಡಿ,
ಆ ಪುರುಷನಾಚರಿಸುತಿರ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.