ಸಾಕಾರವಳಿದು ನಿರಾಕಾರವಾದ ಶರಣಂಗೆ
ಲೋಕದ ಹಂಗುಂಟೇನಯ್ಯ?
ಭ್ರಾಂತಿಸೂತಕ ಉಂಟೇನಯ್ಯ?
ತನ್ನ ನಿಜವ ತಾನೇ ತಿಳಿದು, ನಿಃಪ್ರಿಯನಾಗಿ
ಸ್ವಯಂಜ್ಞಾನವ ಆಚರಿಸುವ ಶರಣಂಗೆ
ಓಂ ನಮೋ ಓಂ ನಮೋ ಎನುತಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sākāravaḷidu nirākāravāda śaraṇaṅge
lōkada haṅguṇṭēnayya?
Bhrāntisūtaka uṇṭēnayya?
Tanna nijava tānē tiḷidu, niḥpriyanāgi
svayan̄jñānava ācarisuva śaraṇaṅge
ōṁ namō ōṁ namō enutirde nōḍā
jhēṅkāra nijaliṅgaprabhuve.