Index   ವಚನ - 347    Search  
 
ಪಾತಕಾಂಗದವನಿಗೆ ನೀತಿ ನಿರ್ಮಳಲಿಂಗವು ಕಾಣಬರ್ಪುದೇನಯ್ಯಾ? ಆ ಪಾತಕಂಗೆ ಅಹಂಕಾರವೆಂಬ ಕೋಣ ಹುಟ್ಟಿ ಸ್ವಯಜ್ಞಾನಿಯೆಂದರಿಯದೆ ಬಲ್ಲೆನೆಂದು ಗರ್ವಿತನಾಗಿ ನುಡಿದಾಡುವ ಪಾತಕನ ಮುಖವ ನೋಡಲಾಗದು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.