Index   ವಚನ - 375    Search  
 
ಊರೊಳಗೊಂದು ಮನೆಯ ಕಂಡೆನಯ್ಯ. ಆ ಮನೆಯೊಳಗೊಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದೊಳಗೆ ಸಪ್ತೇಳುಸಾಗರಂಗಳು ಅಷ್ಟಕುಲಪರ್ವತಂಗಳು, ಸ್ವರ್ಗ ಮರ್ತ್ಯ ಪಾತಾಳ, ಈರೇಳುಭುವನ ಹದಿನಾಲ್ಕುಲೋಕಂಗಳು ಆ ಮಾಣಿಕ್ಯದ ಬೆಳಗಿನೊಳಗೆ ಇಪ್ಪವು ನೋಡಾ. ಗಗನದ ತುಟ್ಟ ತುದಿಯ ಮೇಲೆ ಇರುವ ಹಂಸನು ಆ ಮಾಣಿಕ್ಯವ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ