ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು,
ಬಹಿರಂಗದಲ್ಲಿ ಹಳಿದಾಡುವರೇನಯ್ಯ?
ಬಹಿರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು
ಅಂತರಂಗದಲ್ಲಿ ಹಳಿದಾಡುವರೇನಯ್ಯ?
ಅಂತರಂಗ ಬಹಿರಂಗದಲ್ಲಿ ಸಂಶಯವಿಲ್ಲದೆ
ಬಹಿರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು
ಇಷ್ಟಲಿಂಗಕ್ಕೆ ಅರ್ಪಿಸಿ,
ಪ್ರಾಣಲಿಂಗದಲ್ಲಿ ಕೂಡಿದ್ದೇ ಭಕ್ತಿಯೆಂಬೆನಯ್ಯ.
ಅಂತರಂಗದಲ್ಲಿ ಗುರು
ಲಿಂಗಜಂಗಮ ಪಾದೋದಕ ಪ್ರಸಾದವನರಿತು
ಭಾವಲಿಂಗದಲ್ಲಿ ಕೂಡಿದ್ದೇ ಸದ್ಭಕ್ತಿಯೆಂಬೆನಯ್ಯ.
ಭಕ್ತಿ ಸದ್ಭಕ್ತಿಯೆಂಬ ಭೇದವನು ಅರಿತಾತನೇ ಶರಣನು
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Antaraṅgadalli guruliṅgajaṅgamava kaṇḍevendu,
bahiraṅgadalli haḷidāḍuvarēnayya?
Bahiraṅgadalli guruliṅgajaṅgamava kaṇḍevendu
antaraṅgadalli haḷidāḍuvarēnayya?
Antaraṅga bahiraṅgadalli sanśayavillade
bahiraṅgadalli guru liṅga jaṅgama pādōdaka prasādavanaritu
iṣṭaliṅgakke arpisi,
prāṇaliṅgadalli kūḍiddē bhaktiyembenayya.
Antaraṅgadalli guru
liṅgajaṅgama pādōdaka prasādavanaritu
bhāvaliṅgadalli kūḍiddē sadbhaktiyembenayya.
Bhakti sadbhaktiyemba bhēdavanu aritātanē śaraṇanu
jhēṅkāra nijaliṅgaprabhuve.