Index   ವಚನ - 395    Search  
 
ಕುರುಡಂಗೆ ಕನ್ನಡಿಯ ತೋರಿದಡೆ ಆ ಕುರುಡಂಗೆ ಮುಖ ಕಾಣಲಾರದು ನೋಡಾ. ತುಡುಗಂಗೆ ಜ್ಞಾನವ ಹೇಳಿದರೆ ಆ ತುಡುಗ ಗಡಣದ ಬೆಳಗ ಬಲ್ಲನೇನಯ್ಯ? ಪೊಡವಿಗೊಡೆಯ ಈಶ್ವರನು ತನ್ನ ಮಾರ್ಗದಲ್ಲಿ ನಡೆವರ ಕಂಡು, ಕೂಡಿಕೊಂಡಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.