Index   ವಚನ - 412    Search  
 
ವೇದದಲ್ಲಿ ನಾಲ್ಕು ನುಡಿಯ ಕಲಿತರೇನು? ಶಾಸ್ತ್ರದಲ್ಲಿ ನಾಲ್ಕು ನುಡಿಯ ಕಲಿತರೇನು? ಪುರಾಣಗಳಲ್ಲಿ ನಾಲ್ಕು ನುಡಿಯ ಕಲಿತರೇನು? ಆಗಮದಲ್ಲಿ ನಾಲ್ಕು ನುಡಿಯ ಕಲಿತರೇನು? ಕಲಿತು ಜ್ಯೋತಿಷ್ಯವ ಹೇಳಿದರೇನು? ಶ್ರುತಿಪಾಠಕನಾದರೇನು? ಚೌಷಷ್ಠಿ ವಿದ್ಯವ ಕಲಿತರೇನು? ತನ್ನ ಅಂತರಂಗದ ಪರಬ್ರಹ್ಮದ ನಿಲವ ತಾನರಿಯದೆ ನಾ ಬಲ್ಲೆನೆಂದು ಅಹಂಕರಿಸಿಕೊಂಡಿಪ್ಪ ತರಕಿಮೂಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.