Index   ವಚನ - 443    Search  
 
ಒಬ್ಬ ಪುರುಷನು ಮೂರು ಶಿವಾಲಯವಂ ಪೊಕ್ಕು, ಆರು ದೇಗುಲಕ್ಕೆ ಬಂದು, ಮೂವತ್ತಾರು ಲಿಂಗಾರ್ಚನೆಯಂ ಮಾಡಿ, ಆರು ದೇಗುಲವಂ ಪೊಕ್ಕು, ಮೂರು ಶಿವಾಲಯವ ದಾಂಟಿ ತನ್ನ ಮನೆಗೆ ಹೋಗುವುದ ತಾನೆ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.