ಆಕಾಶದ ಮೇಲೆ ಏಕಾಂತಮಂಟಪವ ಕಂಡೆನಯ್ಯ.
ಆ ಮಂಟಪದೊಳಗೆ ಅನಾದಿಜಂಗಮವ ಕಂಡೆನಯ್ಯ.
ಆ ಅನಾದಿ ಜಂಗಮದ ಪರಮಪ್ರಸಾದವ
ನಾನು ಸ್ವೀಕರಿಸಿ ಬದುಕಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ākāśada mēle ēkāntamaṇṭapava kaṇḍenayya.
Ā maṇṭapadoḷage anādijaṅgamava kaṇḍenayya.
Ā anādi jaṅgamada paramaprasādava
nānu svīkarisi badukirdenayya
jhēṅkāra nijaliṅgaprabhuve.