Index   ವಚನ - 472    Search  
 
ಹೃದಯದಲ್ಲಿಪ್ಪ ಪ್ರಾಣಕ್ಕೆ ವಾಯುವೇ ಆಧಾರ. ಆ ವಾಯುವಿಗೆ ಪ್ರಾಣವೇ ಆಧಾರ, ಈ ಪರಿಯಿಂದ ರೇಚಕ ಪೂರಕಂಗಳಿಂದ ನಡೆವುತಿಪ್ಪುದುನೋಡಾ. ಆ ರೇಚಕಪೂರಕಂಗಳ ಸುಷುಮ್ನನಾಳಕೆ ತಂದು, ಪರಕೆಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.