Index   ವಚನ - 506    Search  
 
ಹಲವು ಯಜ್ಞದ ಮನೆಯಲ್ಲಿ ಒಬ್ಬ ಸತಿಯಳು ಬಲೆಯ ಬೀಸುತಿಪ್ಪಳು ನೋಡಾ. ಆ ಸತಿಯಳ ಕಪ್ಪೆ ನುಂಗಿ ಕೂಗುತಿದೆ ನೋಡಾ. ಆ ಕೂಗಿನ ಶಬ್ದವನರಿವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.