ಹೊನ್ನು ಹೆಣ್ಣು ಮಣ್ಣು ಬಿಟ್ಟು
ಸರ್ವಸಂಗವ ಪರಿತ್ಯಾಗವಂ ಮಾಡಿ ನಿಂದ ನಿಃಕಲಂಗೆ
ಪೂರ್ವಾಶ್ರಯ ಉಂಟೇನಯ್ಯ?
ಆ ನಿಃಕಲತ್ವವನಳಿದು,
ಮರಳಿ ಹೊನ್ನ ಹಿಡಿಯಲಾಗದು,
ಮರಳಿ ಹೆಣ್ಣ ಹಿಡಿಯಲಾಗದು,
ಮರಳಿ ಮಣ್ಣ ಹಿಡಿಯಲಾಗದು.
ಇಂತೀ ತ್ರಿವಿಧಗುಣಗಳಿಗೆ ಸಿಲ್ಕಿ,
ಬಯಲಾಶ್ರಯದಲ್ಲಿ ಬಯಲಾಟವ ಹೂಡಿ
ಬಯಲನಿಬ್ಬೆರಗನೈದಿ ಹೋಗುವ ಮಹೇಶ್ವರನ
ಪಾದೋದಕ ಪ್ರಸಾದವ ಭೇದಿಸಿ
ಕೊಂಬ ಭಕ್ತನ ದೃಢವೆಂತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.