ದೇಹವೆಂಬ ದೇಗುಲದೊಳಗೆ
ಇಪ್ಪತ್ತೈದು ಶಿವಾಲಯವಿಪ್ಪುವು ನೋಡಾ.
ಆ ಶಿವಾಲಯದೊಳಗೊಬ್ಬ
ಪೂಜಕನು ತ್ರಿಕೂಟದಲ್ಲಿ ನಿಂದು
ಪರಂಜ್ಯೋತಿಯೆಂಬ ಲಿಂಗವ ಕೂಡಿ
ಪರಿಪೂರ್ಣವಾದ ಶರಣನ
ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Dēhavemba dēguladoḷage
ippattaidu śivālayavippuvu nōḍā.
Ā śivālayadoḷagobba
pūjakanu trikūṭadalli nindu
paran̄jyōtiyemba liṅgava kūḍi
paripūrṇavāda śaraṇana
enagom'me tōrisayya
jhēṅkāra nijaliṅgaprabhuve.
ಸ್ಥಲ -
ಶಿವಾತ್ಮಜ್ಞಾನ ಉದಯವಾದ ಸ್ಥಲ