Index   ವಚನ - 644    Search  
 
ಘಟ್ಟದ ತುದಿಯ ಮೇಲೆ ಮುಟ್ಟಿ ಆಡುವ ಬೆಳ್ಳಕ್ಕಿಯ ಕಂಡೆನಯ್ಯ. ಬೆಳ್ಳಕ್ಕಿಯ ಹಿಡಿಯಹೋದ ಬೇಂಟೆಕಾರನ ನಿರ್ವಯಲು ನುಂಗಿತ್ತು ನೋಡಾ, ಝೇಂಕಾರ ನಿಜಲಿಂಗಪ್ರಭುವೆ.