Index   ವಚನ - 671    Search  
 
ಸ್ವಯಂಪ್ರಕಾಶಲಿಂಗದಲ್ಲಿ ಸ್ವಯಂಜ್ಞಾನಿ ನಿಂದು, ಸ್ವಯವ ತೋರುತಿಪ್ಪನು ನೋಡಾ. ಆ ಸ್ವಯವ ನೋಡಹೋಗದ ಮುನ್ನ ಅದು ಎನ್ನ ನುಂಗಿತ್ತು. ಅದಕ್ಕೆ ಓಂ ಎಂಬ ಶ್ರುತಿ, ಪವನಧ್ಯಾನ ಲಿಂಗಧ್ಯಾನ ಮಹಾಧ್ಯಾನ. ಧ್ಯಾನ ಮೌನವ ನುಂಗಿ, ಮೌನ ಧ್ಯಾನವ ನುಂಗಿ, ಧ್ಯಾನಮೌನವಿಲ್ಲದೆ ಪರವಶದಲ್ಲಿ ನಿಂದು ಪರಕ್ಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.