Index   ವಚನ - 674    Search  
 
ಆಜ್ಞೇಯಚಕ್ರದಲ್ಲಿಪ್ಪ ಲಿಂಗವನು ಬ್ರಹ್ಮಚಕ್ರಕೆ ತಂದು, ಬ್ರಹ್ಮಚಕ್ರದಲ್ಲಿಪ್ಪ ಲಿಂಗವನು ಶಿಖಾಚಕ್ರಕೆ ತಂದು, ಶಿಖಾಚಕ್ರದಲ್ಲಿಪ್ಪ ಲಿಂಗವನು ಪಶ್ಚಿಮಚಕ್ರಕೆ ತಂದು, ಪಶ್ಚಿಮಚಕ್ರದಲ್ಲಿಪ್ಪ ಲಿಂಗವನು ಅಣುಚಕ್ರಕೆ ತಂದು, ಅಣುಚಕ್ರದಲ್ಲಿಪ್ಪ ಲಿಂಗವನು ನಿರವಯದಲ್ಲಿ ತಂದು, ಪರವಶನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.