ಒಂಬತ್ತು ಮಂದಿರದೊಳಗೆ
ತುಂಬಿಕೊಂಡಿರ್ಪ ಮಹಾಘನಲಿಂಗವ ಕಂಡೆನಯ್ಯ.
ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ನಿಂದು,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು
ನಿತ್ಯನಿಜದಾರಂಭಕ್ಕೆ ಹೋಗಿ ಪರವಶವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ombattu mandiradoḷage
tumbikoṇḍirpa mahāghanaliṅgava kaṇḍenayya.
Ā liṅgada saṅgadinda obba satiyaḷu nindu,
sattucittānanda nityaparipūrṇavemba aidaṅgava garbhīkarisikoṇḍu
nityanijadārambhakke hōgi paravaśavāda sōjigava nōḍā
jhēṅkāra nijaliṅgaprabhuve.