ಜಾಗ್ರಾವಸ್ಥೆಯ ಸ್ಥೂಲದಿಂದರಿದು ಭಕ್ತನಾದೆನಯ್ಯ.
ಸ್ವಪ್ನಾವಸ್ಥೆಯ ಸೂಕ್ಷ್ಮದಿಂದರಿದು ಮಹೇಶ್ವರನಾದೆನಯ್ಯ.
ಸುಷುಪ್ತಿಯವಸ್ಥೆಯ ಕಾರಣದಿಂದರಿದು ಪ್ರಸಾದಿಯಾದೆನಯ್ಯ.
ತೂರ್ಯಾವಸ್ಥೆಯ ಮಹಾಕಾರಣದಿಂದರಿದು
ಪ್ರಾಣಲಿಂಗಿಯಾದೆನಯ್ಯ.
ತೂರ್ಯಾತೀತ ಅವಸ್ಥೆಯ ನಿಃಕಲಕಾರಣದಿಂದರಿದು
ಶರಣನಾದೆನಯ್ಯ.
ನಿರಾವಸ್ಥೆಯ ಪರಿಪೂರ್ಣದಿಂದರಿದು ಐಕ್ಯನಾದೆನಯ್ಯ.
ನಿತ್ಯಾವಸ್ಥೆಯ ನಿರಾಕುಳದಿಂದರಿದು
ಅಖಂಡತೇಜೋಮಯನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Jāgrāvastheya sthūladindaridu bhaktanādenayya.
Svapnāvastheya sūkṣmadindaridu mahēśvaranādenayya.
Suṣuptiyavastheya kāraṇadindaridu prasādiyādenayya.
Tūryāvastheya mahākāraṇadindaridu
prāṇaliṅgiyādenayya.
Tūryātīta avastheya niḥkalakāraṇadindaridu
śaraṇanādenayya.
Nirāvastheya paripūrṇadindaridu aikyanādenayya.
Nityāvastheya nirākuḷadindaridu
akhaṇḍatējōmayanādenayya
jhēṅkāra nijaliṅgaprabhuve.