ಬ್ರಹ್ಮರಂಧ್ರದಲ್ಲಿಪ್ಪ ಮಹಾಜ್ಞಾನಲಿಂಗವೇ
ಚಿನ್ನಾದ ನೋಡಾ.
ಶಿಖಾಚಕ್ರದಲ್ಲಿಪ್ಪ ಸ್ವಯಜ್ಞಾನಲಿಂಗವೇ
ಚಿದ್ಬಿಂದು ನೋಡಾ.
ಪಶ್ಚಿಮದಲ್ಲಿಪ್ಪ ನಿರಂಜನಲಿಂಗವೇ
ಚಿತ್ಕಳೆಯು ನೋಡಾ.
ಆ ಚಿತ್ಕಳೆಯೇ ಭಾವಲಿಂಗ ನೋಡಾ.
ಆ ಚಿದ್ಬಿಂದುವೆ ಪ್ರಾಣಲಿಂಗ ನೋಡಾ.
ಆ ಚಿನ್ನಾದವೆ ಇಷ್ಟಲಿಂಗ ನೋಡಾ.
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು,
ಸಾವಿರೆಸಳ ಮಂಟಪವ ಪೊಕ್ಕು,
ಮುತ್ತಿನ ಗದ್ದುಗೆಯಲ್ಲಿ ನಿಂದು,
ಮಹಾಬೆಳಗ ನೋಡಿ, ಪರಿಪೂರ್ಣಲಿಂಗದೊಳು
ತಾನು ತಾನಾಗಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Brahmarandhradallippa mahājñānaliṅgavē
cinnāda nōḍā.
Śikhācakradallippa svayajñānaliṅgavē
cidbindu nōḍā.
Paścimadallippa niran̄janaliṅgavē
citkaḷeyu nōḍā.
Ā citkaḷeyē bhāvaliṅga nōḍā.
Ā cidbinduve prāṇaliṅga nōḍā.
Ā cinnādave iṣṭaliṅga nōḍā.
Iṣṭaliṅga prāṇaliṅga bhāvaliṅgavemba liṅgatrayavanaritu,
sāviresaḷa maṇṭapava pokku,
muttina gaddugeyalli nindu,
mahābeḷaga nōḍi, paripūrṇaliṅgadoḷu
tānu tānāgippa nōḍā
jhēṅkāra nijaliṅgaprabhuve.