ಆರು ಸ್ಥಲದಲ್ಲಿ ಆರು ಲಿಂಗವ ಕಂಡೆನಯ್ಯ.
ಆರು ಲಿಂಗಸಂಗಸಮರಸದಿಂದ,
ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ
ನಿರಂಜನ ಪರಿಪೂರ್ಣ
ನಿರವಯಲಿಂಗವು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Āru sthaladalli āru liṅgava kaṇḍenayya.
Āru liṅgasaṅgasamarasadinda,
agamya agōcara apramāṇa nirākuḷa
niran̄jana paripūrṇa
niravayaliṅgavu tānē nōḍā
jhēṅkāra nijaliṅgaprabhuve.