Index   ವಚನ - 739    Search  
 
ಉತ್ತಮಜ್ಞಾನದಿಂದ ಪರಮಾನಂದ ಲಿಂಗವ ನೋಡಿ, ಆ ಲಿಂಗದೊಳಗೆ ಅನಂತಕೋಟಿ ಕಿರಣಂಗಳು ಅಡಗಿಪ್ಪವು ನೋಡಾ. ಆ ಲಿಂಗದಲ್ಲಿ ಕೂಡಿ ಪರಿಪೂರ್ಣವಾದ ಮಹಾಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.