Index   ವಚನ - 765    Search  
 
ನಾನು ಇಲ್ಲದೆ, ನೀನು ಇಲ್ಲದೆ, ತಾನೇ ಭಕ್ತನಾದನಯ್ಯಾ, ತಾನೇ ಮಹೇಶ್ವರನಾದನಯ್ಯಾ, ತಾನೇ ಪ್ರಸಾದಿಯಾದನಯ್ಯಾ, ತಾನೇ ಪ್ರಾಣಲಿಂಗಿಯಾದನಯ್ಯಾ, ತಾನೇ ಶರಣನಾದನಯ್ಯಾ, ತಾನೇ ಐಕ್ಯನಾದನಯ್ಯಾ, ತಾನೇ ಗುರುವಾದನಯ್ಯಾ, ತಾನೇ ಲಿಂಗವಾದನಯ್ಯಾ, ತಾನೇ ಜಂಗಮವಾದನಯ್ಯಾ, ತಾನೇ ನಿಷ್ಕಲ ಕೇವಲ ಪರಬ್ರಹ್ಮವಾದನಯ್ಯಾ , ತಾನೇ ನಿರವಯಲಿಂಗವಾದನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.