Index   ವಚನ - 13    Search  
 
ಅನುಭಾವವಿಲ್ಲದೆ ಈ ತನು ಎಳತಟವಾದುದಯ್ಯಾ. ಅನುಭಾವವೀ ತನುವಿಂಗೆ ಆಧಾರ. ಅನುಭಾವರ ಅನುಭಾವವನು ಮನವಾರೆ ವೇದಿಸಿದವರಿಗೆ ಜನನವಿಲ್ಲ ಕಾಣಾ! ರಾಮನಾಥ.