Index   ವಚನ - 25    Search  
 
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ.

C-394 

  Wed 15 Nov 2023  

 ಜೇಡರ ದಾಸಿಮಯ್ಯನವರ ಈ ವಚನ ಅತಿ ಅಬ್ದುತವಾಗಿದೆ. ಮನುಜರ ಪ್ರಕೃತಿಯಲ್ಲಿ ಇರುವ ಯಾವುದೇ ಪ್ರಕೃತಿ ನಿರ್ಮಿತ ವಸ್ತುವನ್ನು ಉಪಯೋಗಿಸಲು ಬಂದವರು ಹೊರತು ದಾನವನ್ನು ಮಾಡುವಷ್ಟು ದೊಡ್ಡವರು ಅಲ್ಲ.
  Basu Moonenakoppa
Karnataka

C-348 

  Sat 19 Aug 2023  

 ಜೇಡರ ದಾಸಮಯ್ಯನವರ ಕೊರಳಲ್ಲಿ ಲಿಂಗವಿರಬೇಕು. ದೇವ ನಿರ್ಮಿತ ಭೂಮಿಯನ್ನು ಯಾವನೋ ದಬ್ಬಾಳಿಕೆಯಿಂದ ಕಬಳಸಿ, ಲ್ಯಾಂಡ್ ಲಾರ್ಡ್ ಆಗಿ, ದುರ್ಬಲರಾದವರು ಆತನ ಹೊಲದಲ್ಲಿ ದುಡಿದು ಬದುಕಿ ಆತನನ್ನೇ ಹೊಗಳುವ ಕಾಲವನ್ನು ಕಂಡು, ಇಳೆ ಬೆಳೆ ಗಾಳಿ ರಾಮನಾಥ (ಶಿವ)ನ ದಾನವೆಂಬುದನ್ನು ಅರಿಯದೆ ಇತರರನ್ನು ಹೊಗಳುವುದನ್ನು ವಿರೋಧಿಸಿದ ಪ್ರಥಮ ಶಿವಶರಣರು ಇವರು. ಶಿವಶರಣ ಈತನು.
  ಡಾ. ಭಾವಿ ಬಸವರಾಜ ಗುರುಬಸವಪ್ಪ