Index   ವಚನ - 51    Search  
 
ಒಡೆಯರನೊಡಗೊಂಡು ಬಂದು ಕೈಗಡಿಗೆಯ ನೀರ ಕಯ್ಯಲ್ಲಿ ಕೊಟ್ಟು 'ಒಡೆಯರೆ! ಕಾಲ ತೊಳಕೋ!' ಎಂಬುವನ ಮನೆಗೆ ಅಡಿಯಿಡಲಾಗದಯ್ಯಾ ಮೃಡಶರಣರು. ಒಡಲಿಚ್ಛೆಗೆ ಬಡಮನವ ಮಾಡಿ ಹೊಕ್ಕುಂಬವರ ಎನ್ನೆಡೆಗೆ ತೋರದಿರಾ, ರಾಮನಾಥ.