Index   ವಚನ - 127    Search  
 
ಮನಮುಟ್ಟಿ ನೆನೆವಲ್ಲಿ ತನು ನಿಮ್ಮದಾಯಿತ್ತು. ತನುಮುಟ್ಟಿ ಅಪ್ಪಿ, ಮನಮುಟ್ಟಿ ನೆರದು ವನಿತೆಯರ ಕೂಟಕ್ಕೆ ತೆರಪಿಲ್ಲವಾಯಿತ್ತು. ಜನನ ಮರಣದ ಬಾಧೆ ಹರಿಯಿತ್ತು. ಈಶ್ವರ! ನಿಮ್ಮ ಪಾದಸೇವೆಯಿಂದ ಕಾಣಾ! ರಾಮನಾಥ.