Index   ವಚನ - 149    Search  
 
ಶ್ರೀ ಗುರು ಲಿಂಗ ಜಂಗಮಕ್ಕೆ ಅರ್ಥ ಪ್ರಾಣಾಭಿಮಾನವ ಕೊಟ್ಟು ಅಹಂಕಾರವಳಿದಿಜಹಂತು ಪುರಾತನರ ಮನೆಯಲ್ಲಿ ಎತ್ತಾಗಿ ಹುಟ್ಟಿಸಯ್ಯಾ. ತೊತ್ತಾಗಿ ಹುಟ್ಟಿಸಯ್ಯಾ, ಬಾಗಿಲ ಕಾಯ್ದಿಪ್ಪಂತೆ ಸೊಣಗನಾಗಿ ಹುಟ್ಟಿಸಯ್ಯಾ, ಜಂಗಮಲಿಂಗವೇ ಶಿವನೆಂದು ನಂಬಿ ನಮಸ್ಕರಿಸುವ ಪುರಾತನರ ಮನೆಯ ಬೇಲಿಯಾಗಿ ಹುಟ್ಟಿಸಯ್ಯಾ, ರಾಮನಾಥ.