Index   ವಚನ - 156    Search  
 
ಸ್ವಸ್ತಿಕಾಸನದಲ್ಲಿದ್ದು ಅತ್ತಿತ್ತ ಚಲಿಸದೆ ನೆಟ್ಟೆಲುವ ನೆಟ್ಟನೆ ಮಾಡಿ, ಅಧೋವಾಯುವನೂರ್ಧ್ವಮುಖಕ್ಕೆ ತಂದು, ಕಂಠ ಸಂಕೋಚದಿಂದ ಊರ್ಧ್ವವಾಯುವ ನಿಲ್ಲೆಂದು ನಿಲಿಸಿ, ಮನವ ತೊಡರಿಸಿ, ಉನ್ಮನಿಯ ಸ್ಥಾನದಲ್ಲಿ ಬಂಧವನವಂ ಮಾಡಿ, ಅಂತರ್ಬಾಹ್ಯ ವ್ಯಾಪಾರವಳಿದು ನಿಂದುದೆ ಯೋಗ, ರಾಮನಾಥ.