Index   ವಚನ - 157    Search  
 
ಸಾಗರದೊಳಗಣ ಕಿಚ್ಚಿನ ಸಾಕಾರದಂತೆ, ಸಸಿಯೊಳಗಣ ಫಲಪುಷ್ಪ ರುಚಿಯ ಪರಿಮಳದಂತೆ, ಮನದ ಮರೆಯ ಮಾತು ನೆನಹಿನಲ್ಲಿ ಅರಿದು, ನಾಲಗೆಯು ನುಡಿವಾಗಲಲ್ಲದೆ ಕಾಣಬಾರದು, ಕೇಳಬಾರದು ಒಂದಂಗದೊಳಗಡಗಿದ ನೂರೊಂದರ ಪರಿ, ರಾಮನಾಥ.