ಆವ ಸ್ವಕಾಯದಿಂದಾದಡು ಆಗಲಿ
ಭಾವಶುದ್ಧವಾಗಿ ಮಾಡುವ ಜಂಗಮಪೂಜೆ,
ಸೂರ ಹುಲ್ಲು ಚುಳುಕೋದಕ ನೇಮ
ಕ್ರೀತಪ್ಪದೆ ಮಾಡುವುದೆ ದೇವಪೂಜೆ.
ಆವ ಪ್ರಸಂಗ ಬಂದಡೆ ಖಂಡಸಿ ನುಡಿವುದೆ ಪಂಡಿತನಿರವು.
ತ್ರಿವಿಧ ಬಂದು ಮುಂದಿರಲಿಕ್ಕೆ
ಅದರಂದವ ನೋಡದಿಪ್ಪುದೆ ನಿಸ್ಸಂಗ ಸುಸಂಗಿಯ ಇರವು.
ಇಂತೀ ವಿಚಾರವನರಿದಲ್ಲಿ ಢಕ್ಕೆಯ ದನಿ ಹೊರಗಾಯಿತ್ತು.
ಕಾಲಾಂತಕ ಭೀಮೇಶ್ವರಲಿಂಗವು ಒಳಗಾಯಿತ್ತು.
Art
Manuscript
Music
Courtesy:
Transliteration
Āva svakāyadindādaḍu āgali
bhāvaśud'dhavāgi māḍuva jaṅgamapūje,
sūra hullu cuḷukōdaka nēma
krītappade māḍuvude dēvapūje.
Āva prasaṅga bandaḍe khaṇḍasi nuḍivude paṇḍitaniravu.
Trividha bandu mundiralikke
adarandava nōḍadippude nis'saṅga susaṅgiya iravu.
Intī vicāravanaridalli ḍhakkeya dani horagāyittu.
Kālāntaka bhīmēśvaraliṅgavu oḷagāyittu.