Index   ವಚನ - 29    Search  
 
ಕಾಲವಂಚಕನಾಗಿ ಗುರುವಿಂಗೆ ಮಾಡಲಿಲ್ಲ. ಕರ್ಮವಂಚಕನಾಗಿ ಲಿಂಗಕ್ಕೆ ಮಾಡಿಲಿಲ್ಲ. ಧನವಂಚಕನಾಗಿ ಜಂಗಮಕ್ಕೆ ಮಾಡಲಿಲ್ಲ. ತ್ರಿವಿಧ ನಿರತಂಗೆ, ಮನ ವಚನ ಕಾಯ ತ್ರಿಕರಣದಲ್ಲಿ ಶುದ್ಧವಾಗಿರ್ಪ ಸದ್ಭಕ್ತ ಕಾಲಾಂತಕ ಭೀಮೇಶ್ವರಲಿಂಗವು ತಾನೆ.