ತಾ ತಂದ ತನುವೆಲ್ಲವು ದೋಷ,
ಆ ತನುವಿನಲ್ಲಿ ಬಂದ ಮನವೆಲ್ಲವು ಪ್ರಕೃತಿ.
ಅದಕ್ಕೆ ಇದಿರಿಟ್ಟು ತೋರಿದ ತ್ರಿವಿಧಮೂರ್ತಿಯ
ಪರುಷ ಪಾಷಾಣವನಿದಿರಿಟ್ಟಂತೆ
ತಮ ಜ್ಯೋತಿಯನಿದಿರಿಟ್ಟಂತೆ
ಅರಿವು ಮರವೆಯನರಿವುದಕ್ಕೆ
ಇದಿರಿಟ್ಟುಕುರುಹ ಕೊಂಡು ಬಂದೆ.
ಮರೆಯದಿರಕ್ಕನೆ, ಮರವೆಯಲ್ಲಿ ಢಕ್ಕೆ ಧಿಕ್ಕರಿಸುತ್ತದೆ.
ಕಾಲಾಂತಕ ಭೀಮೇಶ್ವರಲಿಂಗವನರಿಯ ಹೇಳಿ.
Art
Manuscript
Music
Courtesy:
Transliteration
Tā tanda tanuvellavu dōṣa,
ā tanuvinalli banda manavellavu prakr̥ti.
Adakke idiriṭṭu tōrida trividhamūrtiya
paruṣa pāṣāṇavanidiriṭṭante
tama jyōtiyanidiriṭṭante
arivu maraveyanarivudakke
idiriṭṭukuruha koṇḍu bande.
Mareyadirakkane, maraveyalli ḍhakke dhikkarisuttade.
Kālāntaka bhīmēśvaraliṅgavanariya hēḷi.