Index   ವಚನ - 41    Search  
 
ತಾನರಿಯದೆ ಮಾಡಿದ ದೋಷಕ್ಕೆ ತನಗೆ ಅಘೋರವಿಲ್ಲ. ಅದು ಜಗದ ಹುದುಗು. ತಾನರಿದು ಅಲ್ಲ ಅಹುದೆಂದು ಎಲ್ಲರಿಗೆ ಹೇಳಿ ಪರಧನದಲ್ಲಿ ಪರಸತಿಯಲ್ಲಿ ಅನ್ಯರ ನಿಂದೆಯಲ್ಲಿ ವ್ರತಾಚಾರ ಭಂಗಿತರಲ್ಲಿ ಇದನರಿದು ಅನುಸರಣೆಯ ಮಾಡಿದಡೆ ಕುಂಭೀನರಕದಲ್ಲಿ ಹಿಂಗದಿರ್ಪನು. ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸ್ವಪ್ನದಲ್ಲಿ ದೂರಸ್ಥನು.