ಧ್ಯಾನದಿಂದ ವಸ್ತು, ವಿಷಯದಿಂದ ಮೋಹ,
ಭಾವಶುದ್ಧದಿಂದ ಗುರು,
ದ್ವಂದ್ವವಳಿದು ನಿಂದುದು ಲಿಂಗ,
ತ್ರಿವಿಧದ ಸಂದನಳಿದು ಸಲೆ ಸಂದುದು ಜಂಗಮ.
ಈ ಸ್ಥಲದ ಅಂಗವನರಿದು ಉಭಯ ಭಂಗವಿಲ್ಲದೆ
ಸುಸಂಗದಿಂದ ಮಾಡುವುದು ಭಕ್ತಿಸ್ಥಲ.
ನಿಶ್ಚಯವಾಗಿ ನಿಂದುದು
ಕಾಲಾಂತಕ ಭೀಮೇಶ್ವರಲಿಂಗಕ್ಕೆ
ನಿಶ್ಚಯಿಸಿದ ಉಭಯ ಭಾವ.
Art
Manuscript
Music
Courtesy:
Transliteration
Dhyānadinda vastu, viṣayadinda mōha,
bhāvaśud'dhadinda guru,
dvandvavaḷidu nindudu liṅga,
trividhada sandanaḷidu sale sandudu jaṅgama.
Ī sthalada aṅgavanaridu ubhaya bhaṅgavillade
susaṅgadinda māḍuvudu bhaktisthala.
Niścayavāgi nindudu
kālāntaka bhīmēśvaraliṅgakke
niścayisida ubhaya bhāva.